👆🏻👆🏻👆🏻👆🏻👆🏻👆🏻👆🏻👆🏻
ಹೊಸ ವರ್ಷ
ಸ್ವಲ್ಪ ನೋಡಿ ಹುಷಾರಾಗಿ ಆಚರಿಸಿ
"ವರ್ಷದ ಕೊನೆಯ ದಿನ ಇದೆ
ನಿಮ್ಮ ಕೊನೆಯ ದಿನ ಅಲ್ಲ.!!"
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿನ 30 Typist ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿ-09 ರಂದು ಹೊರಡಿಸಿದ್ದ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.!
⚫ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ SSLC/PUC ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-23 ರಿಂದ 2025 ಜನವರಿ-06 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30469
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://bengalururural.dcourts.gov.in/notice-category/recruitments/
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
K-SET: Marks List:
✍🏻📃✍🏻📃✍🏻📃✍🏻
2024 ನವೆಂಬರ್-24 ರಂದು 1.17 ಲಕ್ಷ ಅಭ್ಯರ್ಥಿಗಳು ಎದುರಿಸಿದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ 41 ವಿವಿಧ ವಿಷಯಗಳ ಅಂತಿಮ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻
KEA ಹೊಸ ದಾಖಲೆ:
✍🏻📋✍🏻📋✍🏻📋✍🏻
⚫ ಈ ವರ್ಷದಲ್ಲಿ 17 ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟಿಸಿ 30 ವರ್ಷದಲ್ಲೇ ಐತಿಹಾಸಿಕ ದಾಖಲೆ ಬರೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA).!!
⚫ ಒಂದು ವರ್ಷದಲ್ಲಿ 20 ಲಕ್ಷಕ್ಕೂ ಅಧಿಕ ಅರ್ಜಿಗಳ ನಿರ್ವಹಿಸಿ, 6,052 ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿದೆ.!!
⚫ ವಿವಿಧ ನಿಗಮ ಮಂಡಳಿಗಳಲ್ಲಿನ ಹುದ್ದೆಗಳ ನೇಮಕಾತಿ, 2 PSI ನೇಮಕಾತಿ, KSFC, BMTC, KPCL, VAO, KSET ಸೇರಿದಂತೆ 17 ನೇಮಕಾತಿಗಳ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
UGC-NET Admit Card:
✍🏻💐✍🏻💐✍🏻💐✍🏻💐✍🏻
⚫ 2025 ಜನವರಿ-03 ರಿಂದ 16 ರ ವರೆಗೆ ನಡೆಯುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ Admit Card ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnetdec2024.ntaonline.in/admitcard/index
⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಖಾಲಿ ಹುದ್ದೆಗಳೆಷ್ಟು ಗೊತ್ತಾ.?:
✍🏻📋✍🏻📋✍🏻📋✍🏻📋✍🏻
⚫ ರಾಜ್ಯದ ವಿವಿಧ ಸರಕಾರಿ ಇಲಾಖೆಗಳಲ್ಲಿ ಪ್ರಸ್ತುತ ಇರುವ ಹುದ್ದೆಗಳೆಷ್ಟು.? ಭರ್ತಿಯಾಗಿರುವ & ಖಾಲಿ ಇರುವ ಹುದ್ದೆಗಳೆಷ್ಟು.?
⚫ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 19-12-2024 ರಂದು ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷೆ ಮತ್ತೆ ಎಡವಟ್ಟು:
✍🏻📋✍🏻📋✍🏻📋✍🏻📋✍🏻📋
⚫ KAS ಮರುಪರೀಕ್ಷೆಯಲ್ಲೂ ಮರುಕಳಿಸಿದ ಲೋಕಸೇವಾ ಆಯೋಗದ ಲೋಪ, ಕನ್ನಡಿಗರ ಕೋಪ, ಅಭ್ಯರ್ಥಿಗಳು ಏನ್ ಮಾಡಿದ್ದಾರೋ ಪಾಪ.!!
⚫ ಇದು ಯಾವುದೋ ಸಣ್ಣಪುಟ್ಟ LKG / UKG ಮಕ್ಕಳಿಗೆ ನಡೆಸಿದ ಪರೀಕ್ಷೆಯಲ್ಲ.! ಇಡೀ ರಾಜ್ಯದ ಬೊಕ್ಕಸವನ್ನು ರಕ್ಷಿಸಬಲ್ಲ, ಆಡಳಿತದ ದಿಕ್ಕನ್ನು ನಿರ್ಧರಿಸಬಲ್ಲ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆ.!! ಹೌದು ನಿನ್ನೆ KPSC ನಡೆಸಿದ KAS ಮರುಪರೀಕ್ಷೆಯಲ್ಲಿಯೂ ಕೂಡಾ ಮತ್ತೆ ಮರುಕಳಿಸಿದೆ ಕನ್ನಡ ಭಾಷಾಂತರ ದೋಷ.!!
⚫ 4-5 ಪ್ರಶ್ನೆಗಳ ಭಾಷಾಂತರದಲ್ಲಿ ಆದ ದೋಷ, ಒಂದೆರಡು ಪರೀಕ್ಷಾ ಕೇಂದ್ರಗಳಲ್ಲಿ ಆದ ಗೊಂದಲ ಹೊರತುಪಡಿಸಿದರೆ, ನಿಜವಾಗಿಯೂ ಓದಿದ್ದ ಪ್ರತಿಭಾವಂತರಿಗೆ ಪರೀಕ್ಷೆ ಸುಗಮವಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
428 KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻📋
⚫ ಈ ಮಾಹಿತಿಯು 2017 ಅಗಸ್ಟ್-20 (ರವಿವಾರ) ರಂದು ನಡೆದಿದ್ದ 2015ನೇ ಸಾಲಿನ 428 ಗೆಜೆಟೆಡ್ ಪ್ರೊಬೆಷನರಿ ( KAS ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದೆ.!!
⚫ 2015ನೇ ಸಾಲಿನ 428 KAS ನೇಮಕಾತಿಯಲ್ಲಿ ವಿವಿಧ ವರ್ಗಗಳಿಗೆ ಮೀಸಲಿಟ್ಟ ಹುದ್ದೆಗಳೆಷ್ಟು.? ಅದರಲ್ಲಿ ಆಯ್ಕೆ ಮಾಡಲಾದ ವಿವಿಧ ವರ್ಗಗಳ ಸಂಖ್ಯೆ ಎಷ್ಟು.? ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 19-12-2024 ರಂದು ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
⚫ SC, ST, C-1, 2A, 2B, 3A & 3B ಮೀಸಲಾತಿ ವರ್ಗದಲ್ಲಿ ಅರ್ಜಿ ಸಲ್ಲಿಸಿ ಮೆರಿಟ್ ಆಧಾರದ ಮೇಲೆ ಸಾಮಾನ್ಯ ವರ್ಗದಲ್ಲಿ ಬರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ: 133 (112+21 HK)
⚫ ಸಾಮಾನ್ಯ ವರ್ಗದಲ್ಲಿ ಅರ್ಜಿ ಸಲ್ಲಿಸಿ ಸಾಮಾನ್ಯ ವರ್ಗದಲ್ಲಿಯೇ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ: 66 & 11HK
🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-2:
✍🏻📃✍🏻📃✍🏻📃✍🏻📃✍🏻
⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-2 ಪತ್ರಿಕೆಯ Question Paper.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Mental Ability : 30
★ Ecology (EVS) : 23
★ Science & Tech. : 14
★ Current Affairs : 11
★ Budget : 09
★ Schemes/Plans : 08
★ GK / Others : 05
===================
★ TOTAL : 100
✍🏻📋✍🏻📋✍🏻📋✍🏻📋✍🏻📋
ಆತ್ಮೀಯರೇ,
KAS ಪರೀಕ್ಷೆ ಬರೆಯಲು ನೀವೊಬ್ಬರೇ ಹೋಗುತ್ತಿದ್ದೀರಿ, Exam ಗೆ Moral Support ನೀಡಲು ಕೆಲವರ ಜೊತೆಗೆ ಅವರ Friends, Parents or Family Members ಬಂದಿರುತ್ತಾರೆ, ಆದರೆ ನಿಮ್ಮ ಜೊತೆಗೆ ಯಾರೂ ಬಂದಿಲ್ಲ.! ಅವರನ್ನು ನೋಡಿ ನನಗೆ Exam ಗೆ Support ಮಾಡಲು ಯಾರೂ ಇಲ್ಲ ನಾನೊಬ್ಬನೇ/ಳೇ ಹೋಗಿ ಪರೀಕ್ಷೆ ಬರೆಯಬೇಕಲ್ಲ ಎಂದು ಚಿಂತೆ ಮಾಡುತ್ತಿರುವವರೇ ದಯವಿಟ್ಟು ಗಮನಿಸಿ, ನಿಮ್ಮ ಜೊತೆಗೆ ಯಾರೂ ಇಲ್ಲವೆಂದಾಗ ಮಾತ್ರ ಆ ದೇವರು ನಿಮ್ಮ ಜೊತೆಗೆ ಇರುತ್ತಾನೆ.! ದೌರ್ಯವಾಗಿ ಹೋಗಿ ಬನ್ನಿ, ಯಾರಿಗೆ ಯಾರೂ ಇಲ್ಲವೋ ಅಂಥವರೊಂದಿಗೆ SR WORLD ಇದ್ದೇ ಇರತ್ತೆ, ನಿಮ್ಮಂಥವರೊಂದಿಗೆ ನಾವಿದ್ದೀವಿ.!!
ಧೈರ್ಯವಾಗಿ ಪರೀಕ್ಷೆ ಎದುರಿಸಿ
ತಂದೆ,ತಾಯಿ, ಗುರುಗಳನ್ನು & ನಿಮಗಿಷ್ಟವಾದ ದೇವರನ್ನು ನೆನಪಿಸಿಕೊಳ್ಳಿ ಅವರ ಆಶಿರ್ವಾದ ನಿಮ್ಮ ಮೇಲಿದೆ, ನೆನಪಿರಲಿ ನೀವು ಒಬ್ಬಂಟಿಯಲ್ಲ. ಈ ಬಾರಿಯ ಯಶಸ್ಸು ಅದು ನಿಮಗಲ್ಲದೇ ಇನ್ಯಾರಿಗೆ.?!!
ಆಲ್ ದಿ ಬೆಸ್ಟ್.
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
ನಾಳೆ KAS ಮರು ಪರೀಕ್ಷೆ:
✍🏻📋✍🏻📋✍🏻📋✍🏻📋✍🏻
⚫ ನಾಳೆ (2024 ಡಿಸೆಂಬರ್-29 ರಂದು) ಗೆಜೆಟೆಡ್ ಪ್ರೊಬೆಷನಸ್೯ ( KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆ ನಡೆಯಲಿದೆ.!!
⚫ ಒಟ್ಟು ಹುದ್ದೆಗಳು : 384
ಅರ್ಜಿ ಸಲ್ಲಿಸಿದವರು : 2,10,910
(ಒಂದು ಹುದ್ದೆಗೆ 550 ಅಭ್ಯರ್ಥಿಗಳ ಫೈಟ್.!!)
⚫ 2024 ಅಗಸ್ಟ್-27 ರಂದು ನಡೆದಿದ್ದ 384 KAS Prelims Exam ಮೂಲ ಪರೀಕ್ಷೆಗೆ ಅರ್ಜಿ ಸಲ್ಲಿಸಿದ 2,10,910 ಅಭ್ಯರ್ಥಿಗಳಲ್ಲಿ 1,31,885 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು.!!
⚫ ಕಾರಣಾಂತರದಿಂದ ಅಂದು ಪರೀಕ್ಷೆಗೆ ಗೈರಾಗಿದ್ದ 79,025 ಅಭ್ಯರ್ಥಿಗಳಿಗೂ ಕೂಡಾ ಇದೀಗ ಮರುಪರೀಕ್ಷೆ ಬರೆಯುವ ಅವಕಾಶವಿದೆ.!!
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
RRB: New Notification:
✍🏻📋✍🏻📋✍🏻📋✍🏻📋
★ SSLC/ ITI ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!
★ Railway Recruitment Board (RRB) ನಲ್ಲಿ 32,000 ಕ್ಕೂ ಅಧಿಕ Assistant (Group-D) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಗೊಂಡಿದೆ.!!
★ ಕಂಪ್ಯೂಟರ್ (CBT) ಮೂಲಕ ನಡೆಯುವ 100 ಅಂಕದ ಪರೀಕ್ಷೆಯ ನಂತರ Physical ಇರತ್ತೆ.!!
★ ಅರ್ಜಿ ಸಲ್ಲಿಸುವ ಅವಧಿ: 23-01-2025 ರಿಂದ 22-02-2025
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
★ ಹಿಂದಿನ ಬಾರಿ (2019 ರಲ್ಲಿ) 1 ಲಕ್ಷಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, 1 ಕೋಟಿಗೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
IAS Coaching Exam Date:
✍🏻📋✍🏻📋✍🏻📋✍🏻📋✍🏻
⚫ ಸರಕಾರದ ವತಿಯಿಂದ ಪದವಿ (Degree) ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ಪ್ರವೇಶ ಪರೀಕ್ಷೆಯನ್ನು 2024 ಜನವರಿ-12 ರಂದು ನಡೆಸಲು ಉದ್ದೇಶಿಸಿ KEA ಯು ಇದೀಗ Syllabus & Time Table ನ್ನು ಪ್ರಕಟಿಸಿದೆ.!!
⚫ ಪರೀಕ್ಷಾ ದಿನಾಂಕ ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು ನಿನ್ನೆಯೇ (ಡಿಸೆಂಬರ್-26 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/33004
✍🏻📋✍🏻📋✍🏻📋✍🏻📋✍🏻
VERY SAD NEWS.!!:
😳😭😳😭😳😭😳
ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ.!!
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.!!
🙏🏻💐🙏🏻💐🙏🏻💐🙏🏻💐🙏🏻
👆🏻👆🏻👆🏻👆🏻👆🏻👆🏻👆🏻👆🏻
PSI ನೇಮಕಾ(ಪಜೀ)ತಿ:
✍🏻📋✍🏻📋✍🏻📋✍🏻📋
⚫ ಪಂಚವಾರ್ಷಿಕ ಯೋಜನೆಯಾದ 545 Civil PSI ಹುದ್ದೆಗಳ ನೇಮಕಾತಿ.!!
ಆಯ್ಕೆಯಾದವರ ಆಯಸ್ಸೇ ಮುಗಿಯುತ್ತಿದೆ
ಆದರೆ ಆದೇಶ ಸಿಗುತ್ತಿಲ್ಲ.!!
(178th Rank ಶಿವರಾಜಕುಮಾರ ಮೊನ್ನೆ ಸಾವನ್ನಪ್ಪಿದ್ದಾರೆ.!)
⚫ ಹೌದು.! ಸಿಂಧುತ್ವ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದರೂ, ನೇಮಕಾತಿ ಆದೇಶ ಸಿಕ್ಕಿಲ್ಲ.! ಆದಷ್ಟು ಬೇಗ Order ನೀಡುವಂತೆ ಆಯ್ಕೆಯಾದ ನೂರಾರು ಅಭ್ಯರ್ಥಿಗಳು ಮಾನ್ಯ ಘನ ಸರಕಾರಕ್ಕೆ SR WORLD ಮೂಲಕ ವಿನಂತಿಸಿದ್ದಾರೆ.!!
⚫ ಕಾನೂನು ಸುವ್ಯವಸ್ಥೆ ಕಾಪಾಡುವ ಕೈಂಕರ್ಯದಲ್ಲಿ ಮೊದಲಿಗರಾಗಲಿರುವ ಇವ(PSI)ರನ್ನು ಇಷ್ಟೊಂದು ಸತಾಯಿಸಿ ಪೊಲೀಸ್ ಇಲಾಖೆಗೆ ಕರೆದುಕೊಂಡರೆ ಹೇಗೆ.?? ಹೊಸ ವ(ಹ)ರುಷಕ್ಕೆ ಸರಕಾರದಿಂದ ಸತಾಯಿಸುವ ಬದಲು ಸಂತೈಸುವ ಕೆಲಸವಾಗಲಿ.!!
⚫ ಈ ನೇಮಕಾತಿ ನಡೆದು ಬಂದ ಹಾದಿ:
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ Provisionl Key Ans : 29-01-2024
★ Revised Key Ans : 23-02-2024
★ Final Key Ans : 01-03-2024
★ Provisional Marks : 01-03-2024
★ Final Marks : 28-03-2024
★ Provsnl Select List : 21-10-2024
★ Range Wise List : 29-10-2024
★ Order Copy: .??
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
JE Revised Final List:
✍🏻📃✍🏻📃✍🏻📃✍🏻📃
ಲೋಕೋಪಯೋಗಿ (PWD) ಇಲಾಖೆಯಲ್ಲಿನ ಗ್ರೂಪ್ ‘ಸಿ’ ವೃಂದದ Junior Engineer (Civil) 325+5 (HK) ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿಯನ್ನು (KSATರ ಪ್ರಕರಣಗಳಲ್ಲಿನ ಆದೇಶದನ್ವಯ) ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
Free Coaching Info.:
💛❤️💛❤️💛❤️💛❤️
2024-25ನೇ ಸಾಲಿಗೆ ಸರಕಾರದ (ಸಮಾಜ ಕಲ್ಯಾಣ ಇಲಾಖೆಯ) ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 30-11-2024 ರೊಳಗಾಗಿ ಆಹ್ವಾನಿಸಬೇಕಿದ್ದ ಅರ್ಜಿಗಳನ್ನು ಕಾರಣಾಂತರದಿಂದ ಮುಂದೂಡಿದ್ದು, 31-01-2025 ರೊಳಗೆ ಅರ್ಜಿ ಆಹ್ವಾನಿಸಲಾಗುವುದೆಂದು ಇಲಾಖೆಯು ಇದೀಗ ತಿಳಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
GTTC Prov. Score List.:
✍🏻📃✍🏻📃✍🏻📃✍🏻📃✍🏻
2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು & ತಾತ್ಕಾಲಿಕ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
"ನಿಮ್ಮೊಂದಿಗೆ ಮಾತನಾಡಲು
ಸಮಯವಿಲ್ಲವೆಂದು ಹೇಳುವವರಿಗೆ
ನಿಜವಾಗಿಯೂ ಸಮಯವಿಲ್ಲವೆಂದರ್ಥವಲ್ಲ.!
ಪ್ರಸ್ತುತ ಅವರಿಗೆ ಪ್ರಾಮುಖ್ಯತೆ ಇರುವ
ವ್ಯಕ್ತಿಗಳ ಪಟ್ಟಿಯಲ್ಲಿ ನೀವು ಇಲ್ಲವೆಂದೇ ಅರ್ಥ.!!"
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
Forest 2nd Final List:
✍🏻📋✍🏻📋✍🏻📋✍🏻📋
310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಲ್ಲಿ ಚಿಕ್ಕಮಗಳೂರು ಅರಣ್ಯ ವೃತ್ತದ 25 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
KAS Re-Exam Updates:
✍🏻📃✍🏻📃✍🏻📃✍🏻📃✍🏻
ನಿನ್ನೆ (2024 ಡಿಸೆಂಬರ್-29 ರಂದು) ನಡೆದ 384 KAS ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಒಟ್ಟು ಅಭ್ಯರ್ಥಿಗಳಲ್ಲಿ ಸುಮಾರು ಅರ್ಧಕ್ಕೂ ಅಧಿಕ ಅಭ್ಯರ್ಥಿಗಳು (ಯುದ್ಧ ಘೋಷಣೆ ಮಾಡುವ ಮುನ್ನವೇ ಶಸ್ತ್ರ ತ್ಯಾಗ ಮಾಡಿ ಶರಣಾಗಿದ್ದಾರೆ) ಪರೀಕ್ಷೆಗೆ ಹಾಜರಾಗಿಲ್ಲ.!!
★ ಅರ್ಜಿ ಸಲ್ಲಿಸಿದವರು : 2,10,910
★ ಗೈರು ಉಳಿದವರು : 1,09,673 (52%)
★ ಪರೀಕ್ಷೆ ಬರೆದವರು : 1,01,237 (48%)
(1 ಹುದ್ದೆಗೆ 264 ಅಭ್ಯರ್ಥಿಗಳ ರಿಯಲ್ ಫೈಟ್.!!)
★ Mainsಗೆ ಆಯ್ಕೆಯಾಗುವವರು : 5,760
★ Interviewಗೆ ಆಯ್ಕೆಯಾಗುವವರು : 1,152
★ ಅಂತಿಮವಾಗಿ Officer ಆಗುವವರು: 384.
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
KPSC ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻
KPSC ಯು ಏಪ್ರಿಲ್-2023 ನಿಂದ ಡಿಸೆಂಬರ್-2024ರ ವರೆಗೆ ಹೊರಡಿಸಿದ 25 ಅಧಿಸೂಚನೆಗಳು ಪ್ರಸ್ತುತ ಯಾವ ಸ್ಥಿತಿಯಲ್ಲಿವೆ ಎಂಬುದರ ಕುರಿತಾಗಿ Notification wise Updated Information ಇಲ್ಲಿದೆ.!!
🌀💦🌀💦🌀💦🌀💦🌀
★ KAS ಪ್ರಿಲಿಮ್ಸ್ ಕಟ್ ಆಫ್: ★
✍🏻📋✍🏻📋✍🏻📋✍🏻📋✍🏻📋✍🏻
⚫ ಇಂದು (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಗೆ ಅರ್ಜಿ ಸಲ್ಲಿಸಿದ 2,10,910 ಅಭ್ಯರ್ಥಿಗಳಲ್ಲಿ ಕೇವಲ 5,760 ಅಭ್ಯರ್ಥಿಗಳು ಮಾತ್ರ ಮುಖ್ಯ ಪರೀಕ್ಷೆ (Mains) ಗೆ ಅರ್ಹರಾಗಲಿದ್ದಾರೆ, ಉಳಿದ 2,05,150 ಅಭ್ಯರ್ಥಿಗಳು ಮತ್ತೆ ಮುಂದಿನ KAS ನೇಮಕಾತಿ ಪರೀಕ್ಷೆಗೆ ಕಾಯೋದು ಅನಿವಾರ್ಯ.!!
⚫ Paper-1 ಮಧ್ಯಮ (Medium) ಕಠಿಣವಾಗಿದ್ರೆ, Paper-2 (Easy) ಸರಳ ಕಠಿಣವಾಗಿತ್ತು, ಒಟ್ಟಾರೆಯಾಗಿ ಕಳೆದ KAS ನೇಮಕಾತಿಗಳಿಗಿಂತ ಸ್ವಲ್ಪ ಹೆಚ್ಚಿಗೆ ಈ ಬಾರಿಯ ಕಟ್ ಆಫ್ ಅಂಕ ನಿಲ್ಲತ್ತೆ, ಬಹಳ ಅಂದ್ರೆ ಕಳೆದ ಬಾರಿಯ ನೇಮಕಾತಿಯ ಕಟ್ ಆಫ್ ಅಂಕಗಳಿಗಿಂತ 10-15 ಅಂಕಗಳು ಮಾತ್ರ ಸೇರಿಸಿಕೊಂಡು ಇಂದಿನ ಕಟ್ ಆಫ್ ಅಂಕ ಲೆಕ್ಕ ಹಾಕಿಕೊಳ್ಳಿ.!!
⚫ Negative ತೆಗೆದು 190-200+ ಅಂಕ ಗಳಿಸಿದ ಯಾವುದೇ ಕೆಟಗೆರಿಯವರು, 170-180+ ಅಂಕ ಗಳಿಸಿದ OBC (2A, 2B, 3A & 3B) ಕೆಟಗೆರಿಯವರು ಹಾಗೂ 160-170+ ಅಂಕ ಗಳಿಸಿದ SC/ST/Cat-1 ಅಭ್ಯರ್ಥಿಗಳು ಹಾಗೂ ಈ ಎಲ್ಲಾ ಕೆಟಗೆರಿಯಲ್ಲಿ 10 ಅಂಕ ಕಡಿಮೆ ಪಡೆದ ಮಹಿಳಾ ಅಭ್ಯರ್ಥಿಗಳೂ ಕೂಡಾ ಈ ಕ್ಷಣದಿಂದಲೇ ಮುಖ್ಯ ಪರೀಕ್ಷೆ ತಯಾರಿ ಮಾಡಿಕೊಳ್ಳಬಹುದು.!!
⚫ 20-08-2017 ರಂದು ನಡೆದ 2015 ನೇ ಸಾಲಿನ 428 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18135
⚫ 24-08-2020 ರಂದು ನಡೆದ 2017 ನೇ ಸಾಲಿನ 106 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19034
🌀💦🌀💦🌀💦🌀💦🌀💦
👆🏻👆🏻👆🏻👆🏻👆🏻👆🏻👆🏻👆🏻👆🏻
KAS Question Paper-1:
✍🏻📃✍🏻📃✍🏻📃✍🏻📃✍🏻
⚫ ಇದೀಗ ತಾನೆ (2024 ಡಿಸೆಂಬರ್-29 ರಂದು) ನಡೆದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ General Studies (GK)-1 ಪತ್ರಿಕೆಯ Question Paper.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Current Affairs : 21
★ Geography : 21
★ Economics : 20
★ IC/ Polity : 16
★ History : 15
★ Award/Scheme : 05
★ GK / Others : 02
===================
★ TOTAL : 100
✍🏻📃✍🏻📃✍🏻📃✍🏻📃✍🏻
👍🏻 WISH U ALL THE BEST: 👍🏻
💐🦜💐🦜💐🦜💐🦜💐🦜💐🦜
ನಿದ್ದೆಯಲ್ಲೂ ಕಾಡುವ KAS
ಹುದ್ದೆಯನ್ನು ಪಡೆಯಲು
ಆಕಳಿಕೆ ಬಂದರೂ ಆಕಾಂಕ್ಷೆ ಬಿಟ್ಟಿಲ್ಲ,
ತೂಕಡಿಕೆ ಬಂದರೂ ತಪಸ್ಸು ಬಿಟ್ಟಿಲ್ಲ,
ಕಣ್ಣುಗಳು ಉರಿದರೂ ಕನವರಿಕೆ ಬಿಟ್ಟಿಲ್ಲ
ಸಮಸ್ಯೆ ಬಂದರೂ ಸ್ವಾರಸ್ಯ ಬಿಟ್ಟಿಲ್ಲ
ಸವಾಲು ಎದುರಾದರೂ ಅಹವಾಲು ನಿಂತಿಲ್ಲ
ಮನಸ್ಸು ಬೇಜಾರಾದರೂ ಕನಸು ಜಾರಿಲ್ಲ
ಅಡೆತಡೆಗಳೆ ಬಂದರೂ ತಡೆಗೋಡೆ ನಮಗಿಲ್ಲ.
ಬೈಗುಳ ಬಂದರೂ ಜೋಗುಳವೆಂದೆವಲ್ಲಾ
ಅವಮಾನ ಅನುಭವಿಸಿದರೂ
ಸ್ವಾಭಿಮಾನ ಬಿಟ್ಟಿಲ್ಲ.!!
ಅನುಮಾನ ಪಟ್ಟರೂ ಛಲಬಿಡದ
ಹನುಮಾನ ನಾವೆಲ್ಲಾ.!!
ಕಂಡ-ಕಂಡವರು ಕೆಂಡವಾದರೂ ಓದುವ
ಪ್ರಚಂಡರು ನಾವೆಲ್ಲಾ.!!
ಎಲ್ಲಾ ಬಿಟ್ಟು ಇದುವರೆಗೆ ನಿದ್ದೆಗೆಟ್ಟು
ಓದಿ ವಿದ್ಯೆ ಪಡೆದು ಸಿದ್ಧಗೊಂಡು
KAS ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ
ನಾಡಕಟ್ಟುವ ನಾಡಪ್ರಭುಗಳಾಗಲಿರುವ ನಿಮ್ಮೆಲ್ಲರಿಗೂ ಶುಭವಾಗಲೆಂದು ನಿಮಗಿದೋ SR WORLD ಶುಭಹಾರೈಸುತ್ತಿದೆ.!!
ವಿಶ್ ಯೂ ಆಲ್ ದಿ ಬೆಸ್ಟ್.!!
💐👍🏻💐👍🏻💐👍🏻💐👍🏻💐👍🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
ಮನುಷ್ಯ ಎರಡು ಸಂದರ್ಭದಲ್ಲಿ ಬಹಳ ಜಾಗರೂಕನಾಗಿರಬೇಕು
ಬಾಯಿಯಲ್ಲಿ ಹಾಕುವಾಗ (ಆಹಾರ)
&
ಬಾಯಿಂದ ಹಾಕುವಾಗ (ಮಾತು)
ಮೊದಲನೇಯದು ಆರೋಗ್ಯ ಕಾಪಾಡತ್ತೆ
ಎರಡನೇಯದು ವ್ಯಕ್ತಿತ್ವ ಕಾಪಾಡತ್ತೆ.!!
✍🏻⚜️✍🏻⚜️✍🏻⚜️✍🏻⚜️✍🏻⚜️
👆🏻👆🏻👆🏻👆🏻👆🏻👆🏻👆🏻👆🏻👆🏻
RTI ನಿಂದ ಪಡೆದ ಮಾಹಿತಿ:
🌳🌴🌳🌴🌳🌴🌳🌴🌳
ಅರಣ್ಯ ಇಲಾಖೆಯಲ್ಲಿ 143 ಉಪವಲಯ ಅರಣ್ಯಾಧಿಕಾರಿ (DRFO) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕಿದೆ.!!
ಇದರೊಂದಿಗೆ Forest Guard , Forest Watcher & Beat Forester ಸೇರಿದಂತೆ ಪ್ರಸ್ತುತ ವಿವಿಧ ನೇಮಕಾತಿಗಳು ಯಾವ ಹಂತದಲ್ಲಿವೆ ಹಾಗೂ ಹೊಸ ನೇಮಕಾತಿಗಳ ಲೇಟೆಸ್ಟ್ ಅಪ್ ಡೇಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32993
🌳🌴🌳🌴🌳🌴🌳🌴🌳
ಇಂದು ಸರಕಾರಿ ರಜೆ:
✍🏻📋✍🏻📋✍🏻📋✍🏻
ಭಾರತದ ಮಾಜಿ ಪ್ರಧಾನಿ ಮಾನ್ಯ ಡಾ. ಮನಮೋಹನ್ ಸಿಂಗ್ ರವರು ದಿನಾಂಕ: 26-12-2024 ರಂದು ನಿಧನರಾದ ಹಿನ್ನೆಲೆಯಲ್ಲಿ ದಿವಂಗತರ ಗೌರವಾರ್ಥವಾಗಿ ಇಂದು 27-12-2024 ರಂದು ಎಲ್ಲಾ ಸರಕಾರಿ ಕಚೇರಿ & ಶಾಲಾ ಕಾಲೇಜುಗಳಿಗೆ ಸಾರ್ವಜನಿಕ ರಜೆಯನ್ನು ಘೋಷಿಸಲಾಗಿದೆ.!!
ಆದ್ದರಿಂದ ಇಂದು ನಡೆಯಬೇಕಿದ್ದ ಪರೀಕ್ಷೆಗಳು, Document Verification & ಸರಕಾರಿ ಕಾರ್ಯಕ್ರಮಗಳು ಬಹುತೇಕ ಮುಂದೂಡಲ್ಪಡಬಹುದು, ಆದ್ದರಿಂದ ಮಾಹಿತಿ ಪಡೆದೆ ಹೋಗಿ.!!
🙏🏻💐🙏🏻💐🙏🏻💐🙏🏻💐🙏🏻
SR WORLD ಸಂದೇಶ:
✍🏻📋✍🏻📋✍🏻📋✍🏻📋
PSI ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ನೂರಾರು ಸಾಧಕರು (SR WORLD) ನಮಗೆ ಸಂದೇಶ ಕಳಿಸಿ(ಸುತ್ತಿ)ದ್ದೀರಿ, ನಿಮ್ಮೆಲ್ಲರಿಗೂ ವೈಯಕ್ತಿಕವಾಗಿ ಪ್ರತಿಕ್ರಿಯೆ ನೀಡಲು ಕಷ್ಟಸಾದ್ಯವಾದ್ದರಿಂದ ಈ ಗ್ರೂಪ್ ಮೂಲಕ ಆಯ್ಕೆಯಾದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು.!!
💐💐💐💐💐💐💐💐💐
ನಮ್ಮ ಒಂದು ಸಣ್ಣ ಅಳಿಲು ಪ್ರಯತ್ನವನ್ನು ನೀವು ಗುರುತಿಸಿ ಅಭಿಮಾನದಿಂದ ಸಂದೇಶ ಕಳಿಸಿದ್ದಕ್ಕೆ ನಮ್ಮ ಕೆಲಸದ ಉತ್ಸಾಹ ಉಲ್ಬಣಗೊಂಡಿದೆ & ಜವಾಬ್ದಾರಿ ದ್ವಿಗುಣಗೊಂಡಿದೆ.! ನಿಮಗೆಲ್ಲರಿಗೂ ಕೃತಜ್ಞತೆಯಿಂದ ಗೌರವ ಸಲ್ಲಿಸುತ್ತೇವೆ. ಆದರೆ "ಈ ಯಶಸ್ಸು ನಿಮ್ಮಿಂದ" ಎನ್ನುವ ಒಂದು ಮಾತನ್ನು ಮಾತ್ರ ಅತ್ಯಂತ ವಿನಯಪೂರ್ವಕವಾಗಿ ತಳ್ಳಿಹಾಕುತ್ತೇವೆ.!
ಏಕೆಂದರೆ ಈ ನಿಮ್ಮ ಯಶಸ್ಸು ನಮ್ಮಿಂದಲ್ಲ.!
ನಿಮ್ಮ ದೊಡ್ಡ Effort ಗೆ ನಮ್ಮ ಸಣ್ಣ Support ಮಾತ್ರವಿದೆ.!!
ಇದು ನಿಮ್ಮ ದಣಿವರಿಯದ ಪ್ರಯತ್ನ, ಸತತ ಕಾಲದ ಸಮರ್ಪಣಾ ಭಾವ ಮತ್ತು ಪ್ರತಿಕ್ಷಣದ ಪರಿಶ್ರಮದ ಫಲಿತಾಂಶವಾಗಿದೆ.! ನಿಮ್ಮ ಹೆತ್ತವರ & ಹೊತ್ತವರ, ಕುಟುಂಬದ, ಸ್ನೇಹಿತರ, ಗ್ರಾಮಸ್ಥರ ಮತ್ತು ನಿಮ್ಮ ಪ್ರೀತಿಪಾತ್ರರ ತ್ಯಾಗವೇ ನಿಮ್ಮನ್ನು ಈ ಮೈಲಿಗಲ್ಲಿಗೆ ಕರೆತಂದಿದೆ ಎಂಬುದನ್ನು ಒತ್ತಿ ಹೇಳುತ್ತೇವೆ.!!
ನಿಮ್ಮಂತಹ ಸಾಧಕರ ಸೇವೆ ಮಾಡಲು ನಮಗೂ ಒಂದಿಷ್ಟು ಅವಕಾಶ ಸಿಕ್ಕಿತ್ತು ಎಂಬುದು ನಮಗೆ ಅತ್ಯಂತ ಖುಷಿ & ಹೆಮ್ಮೆಯ ವಿಚಾರ. ನಿಮಗೆ ಮಾರ್ಗದರ್ಶನ ಮತ್ತು ಬೆಂಬಲಕ್ಕಾಗಿ SR WORLD ವೇದಿಕೆಯನ್ನು ಒದಗಿಸುವ ಮೂಲಕ ನಿಮ್ಮ ಯಶಸ್ಸಿನ ಪ್ರಯಾಣದಲ್ಲಿ ನಾವು ಒಂದು ಸಣ್ಣ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇವೆ. ಆದ್ದರಿಂದ, ದಯವಿಟ್ಟು ನಿಮ್ಮ ಯಶಸ್ಸಿನ ಕ್ರೆಡಿಟ್ ನ್ನು ನಮಗೆ ನೀಡಬೇಡಿ. ನೀವು ಮತ್ತು ನಿಮ್ಮ ಪ್ರೀತಿಪಾತ್ರರು ಮಾತ್ರ ಇದಕ್ಕೆ ಅರ್ಹರು!
Keep shining, and we wish you continued success in all your future endeavors!
Regards,
SR WORLD
✍🏻📋✍🏻📋✍🏻📋✍🏻📋✍🏻