srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Health Dept. ನೇಮಕಾತಿ:
✍🏻📋✍🏻📋✍🏻📋✍🏻📋✍🏻

★ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ 1,205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANM's) & 300 ಆರೋಗ್ಯ ನಿರೀಕ್ಷಣಾಧಿಕಾರಿ (HIOs) ಹುದ್ದೆಗಳನ್ನು KEA/KPSC/HFW ಮುಖಾಂತರ ನೇರ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ) ಮೂಲಕ ಮಾಡಿಕೊಳ್ಳಲು ಸರಕಾರ ಮೊನ್ನೆ (21-12-2024 ರಂದು) ಅನುಮತಿ ನೀಡಿ ಆದೇಶಿಸಿದೆ, ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ.....!!

★ 204 Junior Lab Technician ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.!

★ 413 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 498 Pharmacy Officers ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.!!

★ 705 ಹುದ್ದೆಗಳ ಭರ್ತಿ ಪ್ರಸ್ತಾವನೆ ಪರಿಶೀಲನೆಯಲ್ಲಿದೆ.!!

★ 19,253 Group-D ಹುದ್ದೆಗಳಲ್ಲಿ 75% ರಷ್ಟು ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31755
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Postponed:
✍🏻📃✍🏻📃✍🏻📃✍🏻📃✍🏻

2025 ಜನೆವರಿ-21-24 ರ ವರೆಗೆ ಹಾಗೂ ಜನೆವರಿ-27-30 ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗಳನ್ನು ಇದೀಗ ಮುಂದೂಡಿ ಕ್ರಮವಾಗಿ 2025 ಏಪ್ರಿಲ್ 17-19 ರ ವರೆಗೆ ಹಾಗೂ ಏಪ್ರಿಲ್ 22-25 ರ ವರೆಗೆ ನಡೆಸಲು ಉದ್ದೇಶಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC ಸುಧಾರಣೆ.???:
✍🏻📋✍🏻📋✍🏻📋✍🏻📋

ನಾಳೆ & ನಾಡಿದ್ದು (ಜನವರಿ-11 &12 ರಂದು) 2 ದಿನ KPSC ಸೇರಿದಂತೆ ದೇಶದ ವಿವಿಧ ಲೋಕಸೇವಾ ಆಯೋಗಗಳಲ್ಲಿನ ಸುಧಾರಣೆ, ಹೊಸ ಪರೀಕ್ಷಾ ಕ್ರಮಗಳ ಅಳವಡಿಕೆ, ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಉಪರಾಷ್ಟ್ರಪತಿ ರವರ ಸಮ್ಮುಖದಲ್ಲಿ CM ಸಿದ್ದರಾಮಯ್ಯನವರು ಸೇರಿದಂತೆ ಆಯೋಗಗಳ ಅಧ್ಯಕ್ಷರುಗಳೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ.!! Hope for the best.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC Exam Bell Timing:
✍🏻📋✍🏻📋✍🏻📋✍🏻📋

SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching (FC) ಪ್ರವೇಶ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

OBC: Free Coaching ಬಗ್ಗೆ:
✍🏻🍁✍🏻🍁✍🏻🍁✍🏻🍁✍🏻

⚫ ಕಳೆದ ವರ್ಷ (2023-24ನೇ ಸಾಲಿಗೆ) ಸರಕಾರದ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಪದವಿ ಪಾಸಾದ ಅರ್ಹ ಅಭ್ಯರ್ಥಿಗಳಿಗೆ UPSC (IAS) Civil Service & Bank P.O ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 16-11-2023 ರಂದು ಅಧಿಸೂಚನೆ ಹೊರಡಿಸಿ 04-12-2023 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. 18-02-2024 ರಂದು ಪ್ರವೇಶ ಪರೀಕ್ಷೆ ನಡೆಸಿ 15-03-2024 ರಂದು ಫಲಿತಾಂಶ & 16-05-2024 ರಂದು Selection List ಪ್ರಕಟಿಸಲಾಗಿತ್ತು.!!

⚫ ಆದರೆ ಈ ವರ್ಷ ನವೆಂಬರ್-2024 ರಲ್ಲೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಬೇಕಿತ್ತು, 2-3 ತಿಂಗಳಾದರೂ ಇನ್ನೂ ಹೊರಡಿಸಿಲ್ಲ, ಈ ವರ್ಷ ಈಗಾಗಲೇ SC/ST & Minority ಅಭ್ಯರ್ಥಿಗಳಿಗೆ Free Coaching Exam ಮಾಡಲಾಗಿದೆ/ಲಾಗುತ್ತಿದೆ, ಆದ್ದರಿಂದ OBC ಅಭ್ಯರ್ಥಿಗಳಿಗೆ ಆದಷ್ಟು ಬೇಗ ಅರ್ಜಿ ಆಹ್ವಾನಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻🍁✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Proces Server Marks:
✍🏻📋✍🏻📋✍🏻📋✍🏻📋

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಡಿಸೆಂಬರ್ 2023 ರಲ್ಲಿ ಹೊರಡಿಸಿದ್ದ PROCESS SERVER ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2025 ಜನವರಿ-05 ರಂದು ನಡೆದ Interview ನಲ್ಲಿ 129 ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Typist Copyist Pro. List:
✍🏻📋✍🏻📋✍🏻📋✍🏻📋

ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2022 ಜೂನ್ ನಲ್ಲಿ ಹೊರಡಿಸಿದ್ದ TYPIST-COPYIST ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಡಿಸೆಂಬರ್-23 ರಂದು Interview ನಡೆದಿತ್ತು, ಇದೀಗ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Driver Provisional List:
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ 135 Driver ಹುದ್ದೆಗಳ (ಗುತ್ತಿಗೆ ಆಧಾರದ) ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PH List & Dress Code:
✍🏻📋✍🏻📋✍🏻📋✍🏻📋✍🏻

ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಗೆ ಅರ್ಹರಾದ ವಿಶೇಷಚೇತನ (PH) ಅಭ್ಯರ್ಥಿಗಳ ಪಟ್ಟಿ & Dress Code ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching DV Date:
✍🏻🍁✍🏻🍁✍🏻🍁✍🏻🍁✍🏻

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿ ಸಹಿತ KAS / IAS Free Coaching ನೀಡಲು 2024 ಅಕ್ಟೋಬರ್-06 ರ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಂದು & ನಾಳೆ (2025 ಜನವರಿ-08 & 09 ರಂದು) Document Verification ನಡೆಯಲಿದೆ.!!
✍🏻🍁✍🏻🍁✍🏻🍁✍🏻🍁✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KSRTC: Candidate List:
✍🏻📋✍🏻📋✍🏻📋✍🏻📋✍🏻

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ (ಜಾಹೀರಾತು ಸಂ.1/2020 ದಿನಾಂಕ:
14-02-2020 ರನ್ವಯ) ಅರ್ಜಿ ಸಲ್ಲಿಸಿ, ಹಾಸನ ತರಬೇತಿ ಕೇಂದ್ರದಲ್ಲಿ 2025 ಜನವರಿ-15 ರಿಂದ ಫೆಬ್ರವರಿ-01 ರ ವರೆಗೆ ನಡೆಯಲಿರುವ ಚಾಲನಾ ವೃತ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Download Hall Ticket:
✍🏻📋✍🏻📋✍🏻📋✍🏻📋✍🏻

⚫ ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಪ್ರವೇಶಪತ್ರವನ್ನು KEA ಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ತಪ್ಪಾಗಿದ್ದ ದಿನಾಂಕವನ್ನು ಸರಿಪಡಿಸಿ ಪ್ರಕಟಿಸಿದೆ, ನಿನ್ನೆ ಡೌನ್‌ಲೋಡ್ ಮಾಡಿಕೊಂಡವರು ಇಂದು ಇನ್ನೊಮ್ಮೆ ಮಾಡಿಕೊಳ್ಳಿ, ಪರೀಕ್ಷಾ ದಿನಾಂಕ ಸರಿಯಾಗಿ ಬರತ್ತೆ.!!
https://cetonline.karnataka.gov.in/HALLTICKET_IAS2024/FORMS/HALLTICKET.ASPX

⚫ ಒಟ್ಟು ಹುದ್ದೆಗಳು: 600 (400SC +200ST)
ಅರ್ಜಿ ಸಲ್ಲಿಸಿದವರು : 14,827
ಒಂದು ಹುದ್ದೆಗೆ 25 ಅಭ್ಯರ್ಥಿಗಳ ಫೈಟ್.!!
ಪರೀಕ್ಷಾ ದಿನಾಂಕ:
12-01-2025 (ರವಿವಾರ)
ಪರೀಕ್ಷಾ ಸಮಯ: 2:30pm - 4:30pm
1 ಅಂಕದ 100 ಪ್ರಶ್ನೆಗಳು ಒಟ್ಟು 100 Marks.!!
(ಯಾವುದೇ Negative Marks ಇರುವುದಿಲ್ಲ.!!)
👇🏻👇🏻👇🏻👇🏻👇🏻👇🏻👇🏻👇🏻👇🏻

Читать полностью…

SR W🌍RLD

ಮಾನ್ಯ KEA ಗಮನಕ್ಕೆ:
✍🏻📋✍🏻📋✍🏻📋✍🏻📋

KEA ಯು ಇದೀಗ ಪ್ರಕಟಿಸಿದ SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ನಲ್ಲಿ ಪರೀಕ್ಷಾ ದಿನಾಂಕ: 2025 ಡಿಸೆಂಬರ್-12 ಎಂದು ತಪ್ಪಾಗಿ ನಮೂದಾಗಿದೆ, ಆದ್ದರಿಂದ ಮಾನ್ಯ ಗೌರವಾನ್ವಿತ KEAಯು ಈ ಸಮಸ್ಯೆಯನ್ನು ತಕ್ಷಣವೇ ಸರಿಪಡಿಸಲು ಈ ಮೂಲಕ ವಿನಂತಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

GTTC: Eligible List:
✍🏻📃✍🏻📃✍🏻📃✍🏻

2024 ಡಿಸೆಂಬರ್-9, 10, 11 & 14 ರಂದು ನಡೆಸಲಾದ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಹತಾ ಪಟ್ಟಿಯನ್ನು KEA (
06-01-2025 ರಂದು) ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://cetonline.karnataka.gov.in/kea/GBOREC2024
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಆಯ್ಕೆಪಟ್ಟಿ ಅ(ಕು)ತಂತ್ರ.!!:
✍🏻📋✍🏻📋✍🏻📋✍🏻📋✍🏻

⚫ ಈ ಕೆಳಗಿನ List ಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಸಲ್ಲಿಕೆಯಾಗಿ ಸುಮಾರು ದಿನಗಳೇ ಆಗಿದ್ದರೂ ಇನ್ನೂ ಪ್ರಕಟಗೊಳ್ಳದೇ ಇರುವುದಕ್ಕೆ ಕಾರಣವೇನು.? CTI Provisional List ನ್ನು ವಾಪಸ್ ಕಾರ್ಯದರ್ಶಿಗೆ ಹಿಂದುರುಗಿಸಲಾಗಿದೆಯೇ.? KPSC ಯಲ್ಲಿನ ಹಗ್ಗ ಜಗ್ಗಾಟ, ಅಭ್ಯರ್ಥಿಗಳ ಪರದಾಟ ಇದಕ್ಕೆ ಯಾರದಿದೆಯೋ (ತಿ)ಕಾಟ.??

★ 245 CTI (15 HK+ 230) Provisional Lists.

★ 47 Co-Operative Inspector (Non-HK) Final List.

★ 242 Account Asst. Final List.

★ 67 Junior Account Asst. (Non-HK) Provisional List.

★ ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ (10+06HK) Assistant Director Additional Lists.!!

ಅದೆಷ್ಟೇ ಭಿನ್ನಮತವಿದ್ದರೂ ಒಮ್ಮತದೊಂದಿಗೆ ಕಾರ್ಯ ನಿರ್ವಹಿಸಿ ಆಯೋಗದ ಸಹಮತ ಪಡೆದು ಆದಷ್ಟು ಬೇಗ ಆಯ್ಕೆಪಟ್ಟಿಗಳನ್ನು ಪ್ರಕಟಿಸಬೇಕೆಂಬುದು ಅಭ್ಯರ್ಥಿಗಳ ಅಭಿಮತ. ಮಾನ್ಯ KPSCಗೆ SR WORLD ಕೂಡಾ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻
K-SET: DV DATE:
✍🏻📃✍🏻📃✍🏻📃

2024 ನವೆಂಬರ್-24 ರಂದು 1,06,433 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, 89,413 ಅಭ್ಯರ್ಥಿಗಳು ಹಾಜರಾಗಿ ಬರೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯಲ್ಲಿ, 41 Subject ನಿಂದ ಒಟ್ಟಾರೆ 6,302 ಅಭ್ಯರ್ಥಿಗಳು Qualify ಆಗಿದ್ದಾರೆ, ಅವರಿಗೆ ಇದೀಗ 2025 ಜನವರಿ-13 ರಿಂದ 20 ರ ವರೆಗೆ Document Verification ನಡೆಯಲಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

ಚಿಂತೆಯ ಹಿಂದಿನ ಚಿಂತನೆ:
✍🏻🗒️✍🏻🗒️✍🏻🗒️✍🏻🗒️✍🏻🗒

⚫ ಇದು ನೀವೆಲ್ಲರೂ ಬೆಚ್ಚಿಬೀಳುವ 'ವಿಷ'ಯ.!
ಹೌದು ನಿಮ್ಮ & ನಿಮ್ಮವರ ಸೀಕ್ರೆಟ್ಸ್ ಈಗ ಸೀಕ್ರೆಟ್ ಆಗಿ ಉಳಿ(ಯುವು)ದಿಲ್ಲ.!!

⚫ ರಾಜ್ಯ & ಕೇಂದ್ರ ಸರಕಾರದ ಬಹುತೇಕ ಎಲ್ಲಾ ಇಲಾಖೆಗಳೂ ಸೇರಿದಂತೆ ಕೋಟ್ಯಂತರ ಕುಟುಂಬಗಳ ಸಂಸಾರದ ಅದೆಷ್ಟೋ ಗೌಪ್ಯ ಮಾಹಿತಿಗಳು (Secrets) ವಾಟ್ಸಾಪ್ ಸಂಸ್ಥಾಪಕನ ಹತ್ತಿರ ಇವೆ.!!

⚫ ನಮ್ಮ ನಾಡಿನವರಾದ ನಾವೇ ನಮಗೆ ಸಂಬಂಧಿಸಿದ ಇಲಾಖೆಯ ಯಾವುದಾದರೂ ಒಂದು ಮಾಹಿತಿ ಪಡೆಯಬೇಕಾದರೂ RTI ನಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಿ 1 ತಿಂಗಳು ಕಾದರೂ ಕೂಡಾ ಮಾಹಿತಿ ನೀಡಲು ಹಿಂದೆ ಮುಂದೆ ಯೋಚಿಸುವ ಸರಕಾರ. ತನ್ನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಮೂಲಕ ಅದೆಷ್ಟೋ ಮಾಹಿತಿಯನ್ನು ಕೇಳದೇ ಇದ್ದರೂ ಪುಕ್ಕಟೆಯಾಗಿ ಬೇರೆ ದೇಶದ ವಾಟ್ಸಾಪ್ ಸಂಸ್ಥಾಪಕನಿಗೆ Share ಮಾಡುತ್ತಿರುವುದು ನಿಜಕ್ಕೂ ವಿಷವಾದ ವಿಷಾಧನೀಯ ವಿಷಯ.!!

⚫ ಪ್ರತಿಯೊಂದು ಇಲಾಖೆಗಳ ಯಾವುದೇ Orders, Transfers, File moments, meetings ಇತ್ಯಾದಿ ಕಾರ್ಯಚಟುವಟಿಕೆಗಳ ಸಂಪೂರ್ಣ ಆಂತರಿಕ ಮಾಹಿತಿ ಹಂಚಿಕೆಯಾಗುವುದು 55% ವಾಟ್ಸಾಪ್ ಗ್ರೂಪ್ ಮೂಲಕ, 25% Gmail ಮೂಲಕ, 15% ಟ್ವಿಟರ್ (X) ಮೂಲಕ ಹಾಗೂ 05% Google (Meet) ಮೂಲಕ.!! ಇವು ಯಾವುವು ಸರಕಾರದ ಅಧಿಕೃತ ಜಾಲತಾಣಗಳೇ ಅಲ್ಲ.! ಇವು ನಮ್ಮ ರಾಜ್ಯ / ದೇಶದ್ದೂ ಕೂಡಾ ಅಲ್ಲ.!! ಆದರೂ ಸಂಪೂರ್ಣ ಮಾಹಿತಿ ಇವುಗಳಲ್ಲಿಯೇ Share ಆಗುತ್ತಿರುವುದು ವಿಪರ್ಯಾಸ.!!

⚫ ಬ್ರಿಟೀಷರು ವ್ಯಾಪಾರದ ಮೂಲಕ ಬಂದು ನಮ್ಮನ್ನಾಳಿದರು, ಆದರೆ ಇದೀಗ ವಿದೇಶಿಗರು (Hackers) ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬರುತ್ತಿದ್ದಾರೆ ಎಚ್ಚರ.!! ಈಗಾಗಲೇ Digital Arrest, Cyber Crime, Account Hack ನಂತಹ ಅನುಭವವಾಗಿದೆಯಲ್ಲವೇ.? ಇನ್ನೂ ಬುದ್ದಿ ಕಲಿಯುತ್ತಿಲ್ಲ ನಾವು.!!

⚫ ಜಗತ್ತಿಗೆ ಗೊತ್ತಿರದ, ಈ ನಾಡೇ ನೋಡದ, ಸಮಾಜದ ಸಮೀಪವೂ ಬಾರದ, ಅಕ್ಕಪಕ್ಕದವರೂ ಅರಿಯದ, ಕುಟುಂಬವೇ ಕಾಣದ, ಹೆತ್ತವರಿಗೂ ಗೊತ್ತಿರದ, ಗಂಡನು ಹೆಂಡತಿಗೆ ಹೇಳದ, ಹೆಂಡತಿಯು ಗಂಡನಿಗೆ ತಿಳಿಸದ, ಸ್ನೇಹಿತರಿಗೂ Share ಮಾಡದ, ಬಂಧು ಬಾಂಧವರ ಹತ್ತಿರವೂ ಬಾರದ ಅದೆಷ್ಟೋ ಭಯಾನಕ ವಿಷಯಗಳು ವಾಟ್ಸಾಪ್ ಗೆ ಬಂದು ಸೇರುತ್ತಿವೆ.!!

⚫ ಇಂದು ಕೋಟ್ಯಾಂತರ ಜನ ತಮ್ಮ ಮನಸ್ಸಿನಲ್ಲಿಯೂ ಕೂಡಾ ಬಚ್ಚಿಟ್ಟುಕೊಳ್ಳಲು ಬೆಚ್ಚಿಬೀಳುವ ಅದೆಷ್ಟೋ ಆಘಾತಕಾರಿ ವಿಷಯಗಳನ್ನು, ಅದೆಷ್ಟೋ Secretsಗಳನ್ನು ವಾಟ್ಸಾಪ್ ಗಳಲ್ಲಿಟ್ಟಿದ್ದಾರೆ.! ಒಂದು ವೇಳೆ ಇದುವರೆಗಿನ ಎಲ್ಲಾ ಮಾಹಿತಿ ಬಹಿರಂಗವಾದರೆ ಅದೆಷ್ಟು ಮದುವೆಗಳು ಮುರಿಯುತ್ತವೆಯೋ.? ಸಂಸಾರಗಳು ಸಂಹಾರವಾಗುತ್ತವೆಯೋ.?, ಅದೆಷ್ಟೋ ಬಂಧಗಳು ಸಂಬಂಧ ವಿಲ್ಲದಂತಾಗುತ್ತವೆಯೋ.? ಎಷ್ಟು ಕುಟುಂಬಗಳು ಅಲ್ಲೋಲ ಕಲ್ಲೋಲವಾಗುತ್ತವೆಯೋ.? & ಎಷ್ಟು ಮನುಷ್ಯರ ಮನಸ್ಸುಗಳು ಛಿದ್ರ ಛಿದ್ರವಾಗುತ್ತವೆಯೋ.? ದೇವರೇ ಬಲ್ಲ.!!

⚫ ಎಷ್ಟೋ ವರ್ಷಗಳಿಂದ ವಾಟ್ಸಾಪ್ ಎಂಬ Platform ನ್ನು ಸಂಪೂರ್ಣ Free ಯಾಗಿ ಕೊಡಲು ಅವರಿಗೇನು ತಲೆ ಕೆಟ್ಟಿಲ್ಲ, ಎಷ್ಟೋ ನಿಮ್ಮ ಬಹು ಮುಖ್ಯವಾದ Data ವನ್ನು ಮಾರಿಕೊಳ್ಳಲಾಗುತ್ತಿದೆ, ಯಾವುದೇ Free ಯು ಫ್ರೀ ಯಾಗಿರುವುದಿಲ್ಲ, ಉಚಿತವಾದದ್ದು ಯಾವುದೇ ಇರಲಿ ಅದು ಅನುಚಿತವಾಗಿರತ್ತೆ ಎಂಬುದನ್ನು ಮರೆಯಬಾರದು, ಅಜ್ಜ ಅಗ್ಗವಾದರೆ ಮೊಮ್ಮಗ ದುಬಾರಿಯಾಗಿರುತ್ತಾನೆ.!!

⚫ ಇನ್ನು ಮುಂದೆಯಾದರೂ ಸರಕಾರದ ಪ್ರತಿಯೊಂದು ಇಲಾಖೆಗಳು ತಮ್ಮ Internal Information ನ್ನು ಹಂಚಿಕೊಳ್ಳಲು WhatsApp, Gmail, Google ಎಂಬ Unsecured Private Platform ಗಳ ಬದಲಾಗಿ ತಮ್ಮದೇ ಆದ Government E-Mail ನಂತಹ Secured Platform ಗಳನ್ನು ಬಳಸುವಂತಾಗಲಿ, ಇಲ್ಲವೇ ತಮ್ಮದೇ ಆದ ಇಲಾಖಾ App ನಂತಹ ಒಂದು Platform ನ್ನು develop ಮಾಡಿಕೊಳ್ಳಲಿ, ಆಯಾ ಇಲಾಖೆಯ ಮುಖ್ಯಸ್ಥರು ಸರಕಾರಿ ಕೆಲಸಕ್ಕೆ ವಾಟ್ಸಾಪ್ ನಂತಹ ಅನಧಿಕೃತ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸಲಿ, ಯೋಜಿಸಲಿ ಹಾಗೂ ಜನಸಾಮಾನ್ಯರು ಇನ್ನು ಮುಂದಾದರೂ ತಮ್ಮ Secrets ನಂತಹ ಭಾವನೆಗಳನ್ನು WhatsAppಎಂಬ "ಬಾವನಿಗೆ" ನೀಡಿ ಬಲಿಯಾಗದಿರಲಿ, ಒಟ್ಟಾರೆಯಾಗಿ ನಿಮ್ಮ Beautiful life ಗೆ Painful Knife ಹಾಕಲು ಬಿಡಬೇಡಿ.!! ಈ ಎಲ್ಲ ಚಿಂತೆಗಳು ಚಿಂತನೆಯಾಗಲಿ, ಈ ಮೇಲಿನ‌ ಯೋಚನೆಗಳು ಯೋಜನೆಗಳಾಗಿ ಸೂಕ್ತವಾಗಿದ್ದರೆ ಕಾರ್ಯರೂಪಕ್ಕೆ ಬರಲಿ ಎಂಬುದು SR WORLD ನ ಸದಾಶಯ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻🗒️✍🏻🗒️✍🏻🗒️✍🏻🗒️✍🏻

⚫ ಸ್ಪರ್ಧಾರ್ಥಿಗಳಿಗೊಂದು ಗುಡ್ ನ್ಯೂಸ್.!
ಶೀಘ್ರದಲ್ಲಿಯೇ ಇದೆ ಮತ್ತೊಂದು ಮಹಾ ನೇಮಕಾತಿ.!!

⚫ ಕರ್ನಾಟಕ ಸಣ್ಣ ನೀರಾವರಿ ಇಲಾಖೆಯಲ್ಲಿ AEE, AE, JE, SDA, SDAA, FDA, FDAA, Stenographer, Driver, Cook, Peon & Watchman ಹುದ್ದೆಗಳು ಸೇರಿದಂತೆ ಸಾವಿರಾರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಕರಡು ನಿಯಮಗಳನ್ನು ಒಳಗೊಂಡ ರಾಜ್ಯಪತ್ರ (ಗೆಜೆಟ್) 09-01-2025 ರಂದು ಪ್ರಕಟಗೊಂಡಿದ್ದು, ಇದರೊಂದಿಗೆ ನೇಮಕಾತಿ ವಿಧಾನ, Qualification, ಪರೀಕ್ಷಾ ಪದ್ಧತಿ, Exam Syllabus ಸೇರಿದಂತೆ ಹಲವು ವಿಷಯಗಳನ್ನು ಪ್ರಕಟಿಸಲಾಗಿದೆ.!!

⚫ ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ.! ನಿರೀಕ್ಷಿಸಿ....!!

⚫ ಕ್ಷಣ ಕ್ಷಣದ Updates ಗಳಿಗಾಗಿ ಈಗಾಗಲೇ 5 ಲಕ್ಷದಷ್ಟು ಅಭ್ಯರ್ಥಿಗಳು join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ನೀವೂ Join ಆಗಿ ಲಿಂಕ್ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📋✍🏻📋✍🏻📋✍🏻📋

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ 40 PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2025 ಜನವರಿ-15 ರಿಂದ 23 ರ ವರೆಗೆ ನಡೆಯುವ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Peon Pro. Select List:
✍🏻📋✍🏻📋✍🏻📋✍🏻📋

ಬೆಂಗಳೂರು ನ್ಯಾಯಾಲಯದಲ್ಲಿ ಸೆಪ್ಟೆಂಬರ್ 2022 ರಲ್ಲಿ ಹೊರಡಿಸಿದ್ದ PEON ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದ Provisional Select List.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Proces Servr Pro.List:
✍🏻📋✍🏻📋✍🏻📋✍🏻📋

ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಡಿಸೆಂಬರ್ 2023 ರಲ್ಲಿ ಹೊರಡಿಸಿದ್ದ PROCESS SERVER ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ Provisional Select List & Additional List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
DCC Bank Interview List:
📰🗞️📰🗞️📰🗞️📰🗞️📰

⚫ ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ ಒಂದು ವರ್ಷದ ಹಿಂದೆ (2023 ಡಿಸೆಂಬರ್-22-24 ರಂದು) ನಡೆದಿರುವ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ 1:5 ನಂತೆ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳು ಹಾಗೂ Interview Call Letter ನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/

⚫ ಹೆಚ್ಚಿನ ಮಾಹಿತಿಗಾಗಿ
/channel/SRWORLDShankarBellubbiSir/32457
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

ಈ ಗತ್ತಿನ ಜ'ಗತ್ತಿ'ನಲ್ಲಿ 2 ರೀತಿಯ "WELL-Wishers (ಹಿತೈಷಿಗಳು)" ಇದ್ದಾರೆ.!!

ಮೊದಲನೆಯ WELL Wishers
ನೀವು ಯಾವಾಗಲೂ WELL (ಶುಭ) ಆಗಿಯೇ ಇರಲೆಂದು Wish ಮಾಡುವವರು.!

ಎರಡನೆಯ WELL Wishers
ನೀವು ಯಾವಾಗಲೂ WELL/HELL (ನರಕ) ದಲ್ಲೇ ಇರಲೆಂದು Wish ಮಾಡುವವರು.!!

ಆದ್ದರಿಂದ ನಿಮ್ಮ ನಿಜವಾದ Well Wishers ನ್ನು Choose WELL.!!

ನೆನಪಿರಲಿ, ಇಂದು ಸಮಾಧಿಯ ಮೇಲೆ ಅಳುತ್ತಿರುವವರೇ,
ಇದ್ದಾಗ ಅವರನ್ನು ಬದುಕಲು ಬಿಟ್ಟಿರುವುದಿಲ್ಲ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
🥃🍷🥃🍷🥃🍷🥃🍷🥃

🚨 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Excise Sub Inspector & Constable ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!

🚨 ಈಗಾಗಲೇ 265 Excise Sub Inspector & 942 Constable ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸರಕಾರ ಸಹಮತಿ ನೀಡಿದ್ದು, ನೇಮಕಾತಿ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವುದೊಂದೇ ಬಾಕಿ.!!

🚨 ಹೆಚ್ಚಿನ ಮಾಹಿತಿಗಾಗಿ:
/channel/SRWORLDShankarBellubbiSir/32795
🥃🍷🥃🍷🥃🍷🥃🍷🥃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PSI Coaching 2nd List:
✍🏻📋✍🏻📋✍🏻📋✍🏻📋✍🏻

⚫ ಸರಕಾರದ ವತಿಯಿಂದ ವಸತಿ ಸಹಿತ PSI Free Coaching ನೀಡಲು ಆಯ್ಕೆ ಮಾಡಲಾದ 191 ಅಭ್ಯರ್ಥಿಗಳ ಕಲಬುರಗಿ ವಿಭಾಗದ Batch-2 Select List ಇದೀಗ ಪ್ರಕಟಗೊಂಡಿದೆ.!!

⚫ ಈ List ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 10-12 ದಿನದ ಹಿಂದೆಯೇ (ಡಿಸೆಂಬರ್-26 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
/channel/SRWORLDShankarBellubbiSir/33005
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಅರ್ಜಿಗೆ ಇಂದೇ ಲಾಸ್ಟ್‌ ಡೇ:
✍🏻📃✍🏻📃✍🏻📃✍🏻📃✍🏻

⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 13,735 Junior Associates ಹುದ್ದೆಗಳ ನೇಮಕಾತಿಗೆ ಯಾವುದೇ Degree ಪಾಸಾದ (ಪದವಿ ಅಂತಿಮ ವರ್ಷ/ ಸೆಮಿಸ್ಟರ್ ನಲ್ಲಿ ಓದುತ್ತಿರುವ) ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಂದೇ (
07-01-2025) ಕೊನೆಯ ದಿನ.!!

⚫ ಸಂಪೂರ್ಣ ನೇಮಕಾತಿ ಅಧಿಸೂಚನೆ ಇಲ್ಲಿದೆ.!!
/channel/SRWORLDShankarBellubbiSir/32892

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
https://bank.sbi/careers ಅಥವಾ https://www.sbi.co.in/careers
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

"ಇಂದು ನಿಮಗೆ ಯಾವ ವ್ಯಕ್ತಿ/ವಸ್ತುವಿನಿಂದ
ಅತೀ ಹೆಚ್ಚು ಸುಖ-ಸಂತೋಷ ಸಿಗುತ್ತಿದೆಯೋ,

ಮುಂದೆ ಅದೇ ವ್ಯಕ್ತಿ/ವಸ್ತುವಿನಿಂದ ಅತೀ ಹೆಚ್ಚು ದುಃಖ & ನೋವನ್ನು ಅನುಭವಿಸಬೇಕಾಗುತ್ತದೆ.!!"

ನೆನಪಿರಲಿ.....!!
🌟☀️🌟☀️🌟☀️🌟☀️🌟☀️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AE Addl. Select List:
✍🏻📋✍🏻📋✍🏻📋✍🏻📋

ಜಲಸಂಪನ್ಮೂಲ (WRD) ಇಲಾಖೆಯಲ್ಲಿನ Assistant Engineer (AE Mechanical) ಹುದ್ದೆಗಳ ಹೆಚ್ಚುವರಿ ಪಟ್ಟಿ (Additional List) & ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

IAS Coaching Hall Ticket:
✍🏻📋✍🏻📋✍🏻📋✍🏻📋✍🏻

⚫ ಸರಕಾರದ ವತಿಯಿಂದ ಪದವಿ (Degree) ಪಾಸಾದ SC & ST ಅಭ್ಯರ್ಥಿಗಳಿಗೆ 2025 ಜನವರಿ-12 ರಂದು ನಡೆಯುವ IAS Free Coaching ಪ್ರವೇಶ ಪರೀಕ್ಷೆಯ ಪ್ರವೇಶಪತ್ರವನ್ನು KEA ಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
https://cetonline.karnataka.gov.in/HALLTICKET_IAS2024/FORMS/HALLTICKET.ASPX

⚫ ಒಟ್ಟು ಹುದ್ದೆಗಳು: 600 (400SC +200ST)
ಅರ್ಜಿ ಸಲ್ಲಿಸಿದವರು : 14,827
ಒಂದು ಹುದ್ದೆಗೆ 25 ಅಭ್ಯರ್ಥಿಗಳ ಫೈಟ್.!!
ಪರೀಕ್ಷಾ ದಿನಾಂಕ:
12-01-2025 (ರವಿವಾರ)
ಪರೀಕ್ಷಾ ಸಮಯ: 2:30pm - 4:30pm
1 ಅಂಕದ 100 ಪ್ರಶ್ನೆಗಳು ಒಟ್ಟು 100 Marks.!!
(ಯಾವುದೇ Negative Marks ಇರುವುದಿಲ್ಲ.!!)
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Re-Exam Key Ans.:
✍🏻📃✍🏻📃✍🏻📃✍🏻📃✍🏻

⚫ 2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ (Question Paper) ಪ್ರಶ್ನೆಪತ್ರಿಕೆಗೆ India 4 IAS ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ನಾವೂ ತಿದ್ದಿಕೊಳ್ಳುತ್ತೇವೆ.!!

⚫ ಶೀಘ್ರದಲ್ಲಿಯೇ KPSC ಯಿಂದ Official Key Ans. ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ..!!

⚫ ಈ Question Papers ಗಾಗಿ ಇಲ್ಲಿ ಕ್ಲಿಕ್ ಮಾಡಿ:
/channel/SRWORLDShankarBellubbiSir/33026
&
/channel/SRWORLDShankarBellubbiSir/33027

⚫ Expected Cut-off ಗಾಗಿ ಇಲ್ಲಿ ಕ್ಲಿಕ್ ಮಾಡಿ:
/channel/SRWORLDShankarBellubbiSir/33029

⚫ ಕಳೆದೈದು ವರ್ಷಗಳಲ್ಲಿ ಆದ ಎರಡು KAS ನೇಮಕಾತಿಗಳಲ್ಲಿ ಕನ್ನಡ ಮಾದ್ಯಮದ ಅಭ್ಯರ್ಥಿಗಳ ಆಯ್ಕೆ ಬಗ್ಗೆ RTI ನಲ್ಲಿ ಕೇಳಿದ ಮಾಹಿತಿ ಇಲ್ಲಿದೆ.!!
/channel/SRWORLDShankarBellubbiSir/25745
✍🏻📃✍🏻📃✍🏻📃✍🏻📃✍🏻

Читать полностью…
Subscribe to a channel